ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭಗೊಂಡಾಗ ವರುಣನಿಗೆ ಖುಷಿಯೋ ಖುಷಿ. ಅಜ್ಜಿಯ ಮನೆಗೆ ಹೋಗುವ ಕನಸು ಅಂದು ನನಸಾಗಿತ್ತು. ಸೋದರಮಾವ ನಂಜುಂಡನೊಂದಿಗೆ ಹಸಿರುಹಳ್ಳಿಯಲ್ಲಿದ್ದ ಅಜ್ಜಿಯ ಮನೆಗೆ ಬಂದ ವರುಣ್, ಇಡೀ ದಿನ ಅಜ್ಜಿ-ತಾತನೊಡನೆ ಬಾಯಿತುಂಬಾ ಹರಟೆ ಹೊಡೆದ. ರಾತ್ರಿ ಅಜ್ಜಿ ಹೇಳುವ ಕಥೆ ಕೇಳುತ್ತಾ ನಿದ್ದೆಗೆ ಜಾರಿದ್ದ.
ದಿನಕರನ ಕಿರಣಗಳು ಕಿಟಕಿ ಮೂಲಕ ಒಳಚಾಚಿ ಮುಖಕ್ಕೆ ಹೊಡೆದಾಗ ಕಣ್ಣುಬಿಟ್ಟವನಿಗೆ ಅಜ್ಜಿ ಮಾಡುವ ಪ್ರಿಯವಾದ ನೀರುದೋಸೆ-ಕಾಯಿಚಟ್ನಿ ಕಾಯುತಿತ್ತು.
ಹೊಟ್ಟೆತುಂಬಾ ತಿಂಡಿ ತಿಂದು ತಾತನೊಂದಿಗೆ ತೋಟದ ಕಡೆ ಹೊರಟ. ಅಲ್ಲಿ ಮರದ ತುಂಬಾ ತೊನೆದಾಡುತ್ತಿದ್ದ ಹಲಸು, ಮಾವು, ಸೀಬೆ, ಸೀತಾಫಲ ಮುಂತಾದ ಹಣ್ಣುಗಳು ಕಣ್ಣಿಗೆ ಹಬ್ಬ ಉಂಟು ಮಾಡುತ್ತಿದ್ದವು. ಹಸಿರು ಪ್ರಕ್ರುತಿ, ಪಕ್ಕದಲ್ಲಿ ಜುಳುಜುಳು ನಿನಾದ ಮಾಡುತ್ತಾ ಹರಿಯುತ್ತಿದ್ದ ನೀರು ಪ್ರಕ್ರುತಿ ಪ್ರಿಯನಾದ ವರುಣನಿಗೆ ತಾನು ಸ್ವರ್ಗದಲ್ಲಿದ್ದೇನೆ ಎಂಬ ಭಾವನೆ ಮೂಡಿಸಿತ್ತು. ’ಈ ಹಸಿರು ಸಿರಿಯಲೀ ಮನಸು ಕುಣಿಯಲಿ ನವಿಲೇ....’ ಎಂದು ಭಾವಪೂರ್ಣವಾಗಿ ಹಾಡಲಾರಂಭಿಸಿದ. ’ಏನಪ್ಪಾ ವರುಣ್ ಕವಿಯಾಗಿಬಿಟ್ಯಾ?’ ಎಂದು ತಾತ ಪ್ರಶ್ನಿಸಿದರು.
’ನನಗಿವತ್ತು ತುಂಬಾ ಖುಷಿಯಾಗ್ತಿದೆ ತಾತ. ನಮ್ಮ ಪಟ್ಟಣದಲ್ಲಿ ಇಂತಹ ಹಸಿರು ಕಾಣ ಸಿಗುವುದೇ ಇಲ್ಲ. ಅಲ್ಲಿ ಏನಿದ್ದರೂ ಬರೀ ಕಾಂಕ್ರೀಟ್ ಕಾಡು. ಇಲ್ಲಿ ನೋಡು ಎಲ್ಲವೂ ಹಸಿರು. ಇದೇ ನನ್ನ ಉಸಿರು’ ಎಂದು ಕವಿಯಂತೆ ಮಾತಾಡತೊಡಗಿದ ವರುಣ್. ’ಇಷ್ಟು ಚಿಕ್ಕ ವಯಸ್ಸಿಗೇ ಏಷ್ಟೊಂದು ತಿಳ್ಕೊಂಡಿದ್ದೀಯಲ್ಲೋ’ ಎಂದ ತಾತನಿಗೆ, ’ಹೂಂ ತಾತಾ ನಾನು ರಜಾ ಮುಗಿದು ವಾಪಸ್ಸು ಪಟ್ಟಣಕ್ಕೆ ಹೋಗುವಾಗ ಇಲ್ಲಿಂದ ಗಿಡಗಳನ್ನು ಕೊಂಡೊಯ್ದು ಮನೆ ಮುಂದೆ ದೊಡ್ಡ ತೋಟ ಮಾಡುತ್ತೇನೆ’ ಎಂದ. ’ಸರಿ ಹಾಗೇ ಮಾಡಪ್ಪ’ ಎಂದರು ತಾತ.
ಎರಡು ತಿಂಗಳು ಅಜ್ಜಿ ಮನೆಯಲ್ಲಿ ಹಾಯಾಗಿ ಕಾಲ ಕಳೆದು ಮತ್ತೆ ಪಟ್ಟಣಕ್ಕೆ ಹೆತ್ತವರೊಂದಿಗೆ ಹೊರಟಾಗ ವರುಣ್ ಸಪ್ಪೆಯಾಗಿದ್ದ. ಆದರೆ ಮರೆಯದೆ ಹಲಸು, ಮಾವು, ತೆಂಗು, ಸೀಬೆ, ಸೀತಾಫಲ, ನೇರಳೆ ಮುಂತಾದ ಗಿಡಗಳನ್ನು ತನ್ನೊಂದಿಗೆ ಕೊಂಡೊಯ್ದ. ಈ ಗಿಡಗಳನ್ನು ಮನೆ ಮುಂದೆ ರಸ್ತೆ ಬದಿಯುದ್ದಕ್ಕೂ ನಾಟಿ ಮಾಡಿ ನೀರು ಹಾಕಿ ಪೋಷಿಸತೊಡಗಿದ. ಈತನ ವ್ರುಕ್ಷಪ್ರೇಮವನ್ನು ಕಂಡು ಅಚ್ಚರಿಗೊಂಡ ನೆರೆಹೊರೆಯವರು, ’ಏನಪ್ಪಾ ವರುಣ್, ಸಾಲುಮರ ತಿಮ್ಮಕ್ಕನಂತೆ ಗಿಡ ನೆಡುತ್ತಿದ್ದೀಯಾ. ಈ ಸಾರಿ ರಾಜ್ಯೋತ್ಸವ ಪ್ರಶಸ್ತಿ ನಿನಗೇ ಬರುತ್ತೆ ಬಿಡು’ ಎಂದು ತಮಾಷೆ ಮಾಡುತ್ತಿದ್ದರು.
ನೋಡು ನೋಡುತ್ತಿದ್ದಂತೆ ಗಿಡಗಳು ಬೆಳೆದು ಮರವಾಗಿ ಕಾಯಿ ಬಿಡಲಾರಂಭಿಸಿದವು. ಹಸಿರು ಹಸಿರಾಗಿ ಕಂಗೊಳಿಸುತ್ತಿದ್ದ ಮರಗಳಲ್ಲಿ ಹಣ್ಣುಗಳು ತೊನೆದಾಡತೊಡಗಿದವು. ಅಕ್ಕಪಕ್ಕದವರು ಹಣ್ಣುಗಳನ್ನು ಕಿತ್ತು ಮನೆಗಳಿಗೆ ಒಯ್ಯಲಾರಂಭಿಸಿದರು. ಕೆಲವು ಪಾದಚಾರಿಗಳು ಮರದ ನೆರಳಲ್ಲಿ ವಿಶ್ರಮಿಸುತ್ತಿದ್ದರು. ಮತ್ತೆ ಕೆಲವರು ಮರಗಳ ಕೆಳಗೆ ಗಾಡಿಗಳನ್ನಿಟ್ಟು ನೆರಳಲ್ಲಿ ಸಣ್ಣ ಪುಟ್ಟ ವ್ಯಾಪಾರಗಳನ್ನು ಮಾಡುತ್ತಾ ಹೊಟ್ಟೆ ಹೊರೆಯಲಾರಂಭಿಸಿದರು. ಇದೆಲ್ಲ ಕಂಡು ವರುಣನಿಗಾದ ಸಂತಸ ಅಷ್ಟಿಷ್ಟಲ್ಲ. ನನ್ನಿಂದ ಒಂದಷ್ಟು ಜನರಿಗಾದರೂ ಸಹಾಯವಾಯಿತಲ್ಲಾ ಎಂದು ಆನಂದಪಟ್ಟ. ಸರಕಾರವು ಆತನಿಗೆ ’ವ್ರುಕ್ಷಪ್ರೇಮಿ’ ಎಂಬ ಬಿರುದು ನೀಡಿ ಸನ್ಮಾನಿಸಿತು!!
ಇದೊಂದು ಕಾಲ್ಪನಿಕ ಕಥೆ. ವರುಣನಂತೆ ಎಲ್ಲರೂ ಈ ವಿಷಯವನ್ನು ಇಷ್ಟೇ ಗಂಭೀರವಾಗಿ ಪರಿಗಣಿಸಿದರೆ ಈ ’ಅರ್ಥ್ ಡೇ’ ಎಂಬ ಆಚರಣೆಗೆ ಒಂದು ಮಹತ್ವ ಬಂದಂತಾಗುವುದಿಲ್ಲವೇ?
ಭೂದೇವಿ, ಭೂತಾಯಿ,ಧರಿತ್ರಿ ಎಂದೆಲ್ಲ ಕರೆಯಲ್ಪಡುವ ಭೂಮಿಗೂ ಒಂದು ದಿನವೇ? ಇದೇನಿದು? ಅಪಾರ ಜೀವ ಸಂಕುಲಗಳನ್ನೇ ತನ್ನ ಒಡಲಲ್ಲಿಟ್ಟು ಸಲಹುವಾಕೆಗೆ ಒಂದು ದಿನವೇ? ಪ್ರತಿ ದಿನವೂ ಆಕೆಯದೇ. ಆದರೂ ಭೂಮಿಯನ್ನು ಗೌರವಿಸುವ ಸಲುವಾಗಿ ಶಾಂತಿಗಾಗಿ ಹೋರಾಡುತ್ತಿದ್ದ ಜಾನ್.ಎಮ್.ಸಿ.ಕೆನ್ನೆಲ್ ಎಂಬಾತ ೧೯೬೯ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಜರುಗಿದ ಯುನೆಸ್ಕೊ ಕಾನ್ಫರೆನ್ಸ್ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತಾನೆ. ಪರಿಣಾಮವಾಗಿ ಮಾರ್ಚ್ ೨೧, ೧೯೭೦ರಲ್ಲಿ ಭೂಮಿ ದಿನವನ್ನು ಆಚರಿಸಲಾಯಿತು. ನಂತರ ಗೇಲಾರ್ಡ್ ನೆಲ್ಸನ್ ಎಂಬಾತ ಇದನ್ನು ವಿಶ್ವಕ್ಕೆ ಪರಿಚಯಿಸುವ ಸಲುವಾಗಿ ಏಪ್ರಿಲ್ ೨೨ರಂದು ಪ್ರತ್ಯೇಕವಾಗಿ ಭೂಮಿ ದಿನವನ್ನು ಆಚರಿಸುತ್ತಾನೆ. ಅಂದಿನಿಂದ ಭೂಮಿ ದಿನ ಅಥವಾ ’ಅರ್ಥ್ ಡೇ’ಯು ಆಚರಣೆಗೆ ಬಂತು.
ಪರಿಸರವನ್ನು ಉಳಿಸಿ ಕಾಪಾಡುವುದು ಇದರ ಉದ್ದೇಶ. ಇದಕ್ಕಾಗಿ ಕೆಲವು ದೇಶಗಳಲ್ಲಿ ’ಅರ್ಥ್ ವೀಕ್’ ಎಂದು ಆಚರಿಸಿದರೆ, ಇನ್ನು ಕೆಲವೆಡೆ ’ಅರ್ಥ್ ಅವರ್’ ಎಂದೂ ಆಚರಿಸುತ್ತಾರೆ. ಅರ್ಥ್ ಅವರ್ ಎಮ್ದು ಒಂದು ಅಥವಾ ಎರಡು ಗಂಟೆ ಸಮಯ ವಿದ್ಯುಥ್ ಉರಿಸದೆ ವಿದ್ಯುತ್ ಉಳಿತಾಯ ಮಾಡುತ್ತಾರೆ. ಇನ್ನು ಕೆಲವೆಡೆ ಗಿಡನೆಡುವ ಕಾರ್ಯಕ್ರಮಗಳೂ ನಡೆಯುತ್ತವೆ. ಒಟ್ಟಿನಲ್ಲಿ ಇದು ಭೂತಾಯಿಯ ಅಭಿವ್ರುದ್ಧಿಗಾಗಿ ಆಕೆಯ ಮಕ್ಕಳಿಂದ ಪರಿಸರ ಕಾರ್ಯಕ್ರಮಗಳನ್ನು ನಡೆಸಲ್ಪಡುವ ದಿನ. ಭೂಮಿಯನ್ನು ಹೆಣ್ಣಿಗೆ ಹೋಲಿಸಿದ್ದಾರೆ. ’ನಾರಿ ಮುನಿದರೆ ಮಾರಿ’ ಎಂಬಂತೆ ಆಕೆ ಮುನಿಸಿಕೊಂಡರೆ ಮಾರಿಯಂತೆ ವರ್ತಿಸುತ್ತಾಳೆ. ಬದಲಾಗಿ ಪ್ರೀತಿಯಿಂದ ವರ ಕೇಳಿದರೆ ಕೇಳಿದ್ದನ್ನೆಲ್ಲಾ ನೀಡುವ ವರಲಕ್ಷ್ಮಿ ಆಕೆ.
’ಕ್ಷಮಯಾ ಧರಿತ್ರಿ’ ಎಂಬೊಂದು ಮಾತಿದೆ. ಇದರರ್ಥ ಕ್ಷಮೆಯಲ್ಲಿ ಭೂತಾಯಿಯಂತೆ ಕರುಣಾಮಯಿ ಆಗಿರಬೇಕೆಂದು. ಭೂತಾಯಿಯು ಬಹಳ ಕ್ಷಮಾಗುಣವುಳ್ಳವಳು. ತನ್ನ ಒಡಲಲ್ಲಿರುವ ಜೀವರಾಶಿಗಳು ತನ್ನನ್ನು ಅದೆಷ್ಟು ನೋಯಿಸಿದರೂ ಅಷ್ಟು ಬೇಗನೆ ಆಕೆ ಮುನಿಸಿಕೊಳ್ಳುವುದಿಲ್ಲ. ಬಹಳಷ್ಟು ದಿನದ ಕರುಣಾಮಯಿಯಂತೆ ಕಾಯುತ್ತಾಳೆ. ಉಪಟಳ ಅತಿಯಾದಾಗ ಮಾತ್ರ ಸುನಾಮಿಯಂತೆ ಸಿಡಿದೇಳುತ್ತಾಳೆ. ಭೂಕಂಪ, ಪ್ರವಾಹ ಇತ್ಯಾದಿ ಪ್ರಕೋಪಗಳೆಲ್ಲ ಆಕೆಯ ಮುನಿಸಿನ ರೂಪಗಳು.ಎಲ್ಲವನ್ನೂ ಕ್ಷಣದಲ್ಲಿ ನಾಶಪಡಿಸಿ ಅಟ್ಟಹಾಸಗೈಯುವ ರುದ್ರಿಯಾಗುತ್ತಾಳೆ. ಇದಕ್ಕಾಗಿ ಅನ್ನ ನೀಡುವ ಭೂಮಿಯನ್ನು ನಾವೆಂದೂ ಮರೆಯಬಾರದು. ಆಕೆಯನ್ನು ಪ್ರೀತಿಸಿ, ಗೌರವಿಸಬೇಕು.
ಭೂಮಿ ಮೇಲಿನ ಹಸಿರು ವನರಾಶಿ ದಿನೇ ದಿನೇ ನಾಶವಾಗುತ್ತಿದೆ. ಮಾನವನ ಅನುಕೂಲಕ್ಕೆಂದೇ ಭೂಮಿಯು ಉಡುಗೊರೆಯಾಗಿ ನೀಡಿರುವ ಅಪಾರ ಹಸಿರು ಗಿಡ-ಮರಗಳ ಉಪಯೋಗಗಳನ್ನು ಅರಿತು ಬಳಸುವ ಬದಲಾಗಿ, ತನ್ನ ಕೈಯಾರೆ ತಾನೇ ಸರ್ವ ನಾಶಗೈಯುತ್ತಿದ್ದಾನೆ. ಉಸಿರಾಡಲು ಸ್ವಚ್ಚಗಾಳಿಯಿಲ್ಲದಂತೆ ಪರಿಸರ ನಾಶಪಡಿಸುತ್ತಾ ತನ್ನ ಅವನತಿಗೆ ತಾನೇ ಕಾರಣನಾಗುತ್ತಾನೆ. "ಒಂದು ಗಿಡ ಕಡಿದರೆ ಎರಡು ಗಿಡ ನೆಡು" ಎಂದು ಹಿರಿಯರು ನುಡಿಯುತ್ತಿದ್ದರು. ಆದರೆ ಇಂದು ಮರ ಕಡಿಯುವವರೇ ಅಧಿಕ ವಿನಹ, ಮರ ಬೆಳೆಸುವವರು ವಿರಳವಾಗಿದ್ದಾರೆ. ನಗರಗಳಲ್ಲಿ ಎಲ್ಲೆಲ್ಲೂ ಕಾಂಕ್ರೀಟ್ ಕಾಡುಗಳು ತಲೆಯೆತ್ತುತ್ತಿವೆ. ತಂಪಾದ ಗಾಳಿಯಿಲ್ಲ, ಇಂಪಾದ ಪಕ್ಷಿಗಳ ಕಲರವವಿಲ್ಲ. ವಾತಾವರಣ ದಿನೇ ದಿನೇ ಮಲಿನಗೊಳ್ಳುತ್ತಿದೆ. ಇದನ್ನೆಲ್ಲಾ ತಡೆಯಲು ಪ್ರತಿಯೋರ್ವರೂ ಗಿಡ ನೆಡುವ ಸಂಕಲ್ಪ ಮಾಡಬೇಕು. ನೆಟ್ಟ ಗಿಡಗಳಿಗೆ ನೀರು ಹಾಕಿ ಪೋಷಿಸುವ ಔದಾರ್ಯವೂ ಬೇಕು. ಭೂತಾಯಿಯು ತನ್ನ ಒಡಲಲ್ಲಿ ಹುದುಗಿಸಿಟ್ಟಿರುವ ಅಪಾರ ಭೂ ಸಂಪತ್ತನ್ನು ನಾಶಗೈಯುವ ಕಾರ್ಯ ನಿಲ್ಲಬೇಕು. ಮಾನವನಿಗೆ ಉಸಿರು ನೀಡುವ ತಾಯಿಯ ಬಸಿರು ಬಗೆಯುವ ದುಷ್ಕ್ರುತ್ಯ ಕೊನೆಯಾಗಬೇಕು.
ಭೂಮಿಯೊಳಗಿನ ಅಂತರ್ಜಲ ದಿನೇ ದಿನೇ ಕುಸಿಯುತ್ತಿದೆ. ಇದಕ್ಕಾಗಿ ಪ್ರತಿಯೋರ್ವರೂ ನೀರೆಂಬ ಜೀವಜಲವನ್ನು ಅವಶ್ಯಕತೆಗೆ ತಕ್ಕಷ್ಟೇ ಬಳಸಿ ಪೋಲು ಮಾಡದೇ ಕಾಪಾಡಬೇಕು. ನೀರಿನಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ನೀರೇ ಇಲ್ಲದಿದ್ದರೆ ವಿದ್ಯುತ್ ಎಲ್ಲಿಂದ ಬಂದೀತು? ಇದಕ್ಕಾಗಿ ಸೂರ್ಯನ ಶಾಖದಿಂದ ವಿದ್ಯುತ್ ತಯಾರಿಸಿ ಬಳಸುವ ಕಾರ್ಯವು ಹೆಚ್ಚಾಗಿ ಬಳಕೆಗೆ ಬರಬೇಕು. ವಿದ್ಯುತ್ ಪೋಲಾಗದಂತೆ ಜಾಗ್ರತೆ ವಹಿಸಬೇಕು. ಭೂಮಾತೆಯು ನಮಗೆ ಉಚಿತವಾಗಿ ನೀಡಿರುವ ಸ್ವಚ್ಚಗಾಳಿ, ಶುದ್ಧ ನೀರು, ಹಸಿರು ಪರಿಸರ ಇವೆಲ್ಲವನ್ನೂ ಕಾಪಾಡಿ ಮುಂದಿನ ಜನಾಂಗಕ್ಕೆ ಹಸ್ತಾಂತರಿಸಬೇಕು. ಇವೆಲ್ಲವನ್ನೂ ನಮ್ಮಂತೆಯೇ ಅನುಭವಿಸುವ ಹಕ್ಕು ನಮ್ಮ ಮುಂದಿನ ಜನಾಂಗಕ್ಕೂ ಇದೆಯಲ್ಲವೇ? ಆದ್ದರಿಂದ ಭೂಮಿ ದಿನ ಅಥವಾ ’ಅರ್ಥ್ ಡೇ’ಯ ಮಹತ್ವವನ್ನು ಅರಿತು ಭೂತಾಯಿಯ ಅಭಿವ್ರುದ್ಧಿಗಾಗಿ ಪಣತೊಟ್ಟು ಭೂದೇವಿಗೆ ನಮಿಸೋಣ!!!

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ